>> • || ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ‍ ಸಾಧಿಕೆ, ಶರಣ್ಯೇ ತ್ರಯಂಭಿಕೆ ಗೌರಿ ನಾರಾಯಣಿ ನಮೋಸ್ತುತೇ || ಶರಣಾಗತ ದಿನಾರ್ತ ಪರಿತ್ರಾಣ ಪಾರಾಯಣೇ ಸರ್ವಸ್ಯಾರ್ಥಿ ಹರೇ ದೇವಿ ನಾರಾಯಣಿ ನಮೋಸ್ತುತೇ || .
Drop Down Menus CSS Drop Down Menu #

Home

ತ್ರಿನಯನಾಂ ಹಿರಣ್ಯ ಸುಂದರೀಂ ಗೌರಿ ಪದ್ಮಾಸನಾಸ್ಥಿತಾಂ |
ಬಾಲಚಂದ್ರಾಕೃತಿ ಸಿಂಧೂರಾಂ ಲಲಿತೇ ಶಂಖ-ಚಕ್ರ-ಮಭಯ-ಶೂಲಾಂಭುಜಾಂ ||
ಪಂಚಪಣಿವಿಭೂಷಿತ ಹೇಮ ಮುಕುಟಾಂ ಚಂಡಿಕಾ ವರಸಿಂಹ-ವೃಷಭ ವಾಹನಾಂ |
ಹಯವೇಶಾಂತ ಪುರಾಧೀಶ್ವರೀಂ ವಂದೇ ಪರಾಶಕ್ತಿಃ ನಮಾಮಿ ಸ್ವರ್ಣದುರ್ಗಾಪರಮೇಶ್ವರೀಂ ||


ಶ್ರೀ ಕ್ಷೇತ್ರ ಕುದುರೆಕೆರೆಬೆಟ್ಟು

ಶ್ರೀ ಆದಿಪರಾಶಕ್ತಿ ಸ್ವರ್ಣದುರ್ಗಾಪರಮೇಶ್ವರೀ ಅಮ್ಮನವರು ಮೂರು ಶಕ್ತಿಗಳ ಸಮ್ಮಿಲನ ರೂಪ. ದೇವಿ ಭಾಗವತದಲ್ಲಿ ಉಲ್ಲೇಖಿಸಿರುವಂತೆ ಶ್ರೀ ಆದಿಪರಾಶಕ್ತಿಯು ಪಾರ್ವತಿಯಾಗಿ ಅವತಾರವೆತ್ತಿ ದುಷ್ಟಸಂಹಾರಿಣಿ ದುರ್ಗೆಯಾಗಿ ಭುವಿಯಲ್ಲಿನ ದುರುಳ ದಾನವರನ್ನು ನಾಶಮಾಡುತ್ತಾಳೆ. ಇವಳೇ ದುರ್ಗೆ, ಲಕ್ಷ್ಮೀ, ಸರಸ್ವತೀ. ಇವಳೇ ರುದ್ರ-ವಿಷ್ಣು-ಬ್ರಹ್ಮ. ಸಕಲರಿಗೂ ಮಾತೆಯೂ, ಆದ್ಯಂತ ರಹಿತೆಯೂ ಆದ ಭಗವತಿ ಆದಿಮಾಯೆ ದುರ್ಗೆ.

ಆದಿಪರಾಶಕ್ತಿ ಪೂರ್ಣ ರೂಪದಲ್ಲಿ ಶಿವನ ರಾಣಿ ಪಾರ್ವತಿಯಾಗಿ ಅವತಾರವೆತ್ತುತ್ತಾಳೆ. ಇವಳು ಸತೀಯಾಗಿಯೂ, ದುರ್ಗೆಯಾಗಿಯೂ, ಮಹಿಷಮರ್ದಿನಿಯಾಗಿಯೂ, ಮೂಕಾಂಬಿಕೆಯಾಗಿಯೂ, ಮಿನಾಕ್ಷಿ-ಕಾಮಾಕ್ಷಿ-ಚಾಮುಂಡಿ-ಭದ್ರಕಾಳಿ ಹೀಗೆ ಹಲವಾರು ರೂಪದಲ್ಲಿ ಶಿವನೊಡನೆಶಿವಶಕ್ತಿಯಾಗಿ ತನ್ನ ಮಾಯೆಯನ್ನು ತೋರುತ್ತಾಳೆ. ಇವಳೇ ಮಾತೃಸ್ವರೂಪಿಯಾಗಿ ಸ್ಕಂದ, ಗಣೇಶ, ವೀರೇಶ ಹಾಗೂ ಸಕಲ ದೇವಗಣಗಳಿಗೂ ಮಾತೆಯಾಗಿ ಮಾತೃದೇವತೆಯೆನಿಸಿಕೊಳ್ಳುತ್ತಾಳೆ. ಇವಳು ಮನಸ್ಸಿನ ದೇವತೆಯಾಗಿಯೂ, ಶಕ್ತಿದೇವಿಯಾಗಿಯೂ ಭಕ್ತರನ್ನು ಪೊರೆಯುತ್ತಾಳೆ.

ಶಿವೆಯಾದ ದುರ್ಗೆ ಹರಿಯ ಸೋದರಿಯಾಗಿ ವಿಷ್ಣುಮಾಯೆಯೆನಿಸುತ್ತಾಳೆ. ಕಾರಣದಿಂದ ಶಿವನ ಮಡದಿಯನ್ನು ರಂಗನಾಥ ಸೋದರಿ ಎಂದು ಕರೆಯಲಾಗುತ್ತದೆ. ಐಹಿಕವಾಗಿ ಸೋದರಿಯಾಗಿಯೂ, ಮೂಲತಃ ಆದಿಮಾಯೆಯರಾಜಸರೂಪವಾದ ಇವಳೆ ವಿಷ್ಣುವಿನೊಂದಿಗೆಮಹಾಲಕ್ಷ್ಮೀಯಾಗಿಶ್ರೀಯಾಗಿ, ಪದ್ಮಾವತಿಯಾಗಿಯೂ, ಸೀತಾ-ಸತ್ಯಭಾಮೆ, ರಾಧಾ, ಭೂದೇವಿಯಾಗಿಯೂ ಮೆರೆಯುತ್ತಾಳೆ. ಇವಳು ಸಂಪತ್ತಿನ ಒಡತಿಯಾಗಿ ಸರ್ವಸಂಪದವನ್ನು ಅನುಗ್ರಹಿಸುತ್ತಾಳೆ.

ಹೀಗೆ ಮಾಹಾಮಾಯೇಯು ವಿವಿಧ ಮಾಯೆಯಿಂದ ಹರಿ-ಹರರಲ್ಲಿ ಬೆರತಂತೆ ಬ್ರಹ್ಮನಲ್ಲಿ ವಾಣಿಯಾಗಿ, ಶಾರದೆ, ಸರಸ್ವತೀ, ವಾಗ್ದೇವಿ ಎಂಬ ಹಲವಾರು ನಾಮದಿಂದ ಕರೆಸಿಕೊಳ್ಳುತ್ತಾಳೆ. ಇವಳು ವಿದ್ಯಾಧಿದೇವತೆಯಾಗಿ ಜ್ಞಾನಾಧಿಗಳನ್ನು ದಯಪಾಲಿಸುತ್ತಾಳೆ.

ಮೂಲಕ ಮಹಾದೇವಿ ಆದಿಮಾಯೆಯ ಲೀಲೆ ಅಪಾರವಾದುದು. ಇವಳ ಮಹಿಮೆಯನ್ನು ಬಣ್ಣಿಸಲು ಅಸಾಧ್ಯವಾದುದು. ಹೀಗೆ "ಆದಿಶಕ್ತಿ"ಯಾಗಿ ಶಕ್ತಿಯನ್ನು "ಆದಿಲಕ್ಷ್ಮೀ"ಯಾಗಿ ಸಂಪತ್ತನ್ನು, "ಆದಿವಿದ್ಯೆ"ಯಾಗಿ ಜ್ಞಾನವನ್ನು ದಯಪಾಲಿಸುವ "ಇಚ್ಛಾ-ಜ್ಞಾನ-ಕ್ರಿಯಾ" ಶಕ್ತಿಯನ್ನು ನೀಡುವ ತ್ರಿಗುಣಾತ್ಮೀಕಾ ದೇವಿಯಾಗಿದ್ದಾಳೆ.